ದೇಶಕ್ಕೆ ಮಾತಾಡುವ ರಾಷ್ಟ್ರಪತಿ ಬೇಕು.. ದೇಶಕ್ಕೆ ಮೌನಿಯಾಗಿರುವ ರಾಷ್ಟ್ರಪತಿ ಅಥವಾ ರಬ್ಬರ್ ಸ್ಟಾಂಪ್ ರಾಷ್ಟ್ರಪತಿಯ ಅಗತ್ಯ ಇಲ್ಲ ಎಂದು ವಿಪಕ್ಷಗಳ ಬೆಂಬಲಿತ ರಾಷ್ಟ್ರಪತಿ ಅಭ್ಯರ್ಥಿ ಯಶ್ವಂತ ಸಿನ್ಹಾ ಪುನರುಚ್ಚರಿಸಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಿಎಲ್‍ಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಗೆದ್ದರೆ ದೇಶದ್ರೋಹ ಕಾನೂನು ರದ್ದು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ ಅಂದ್ರು. ವಿಪಕ್ಷಗಳು ಮಾತಾಡುವ ಪರಿಸ್ಥಿತಿ ಇಲ್ಲ. ಯಾರಾದರೂ ಏನಾದರೂ ಮಾತಾಡಿದರೆ ತನಿಖಾ ಸಂಸ್ಥೆಗಳಿಂದ ನೊಟೀಸ್ ಬರುತ್ತೆ. ಮಹಾರಾಷ್ಟ್ರದಲ್ಲಿ, ಕರ್ನಾಟಕದಲ್ಲಿ, ಮಧ್ಯಪ್ರದೇಶ, ಗೋವಾ, ಅರುಣಾಚಲ ಪ್ರದೇಶದಲ್ಲಿ ಏನೇನಾಗಿದೆ ಅಂತ ಎಲ್ರಿಗೂ ಗೊತ್ತಿದೆ. ಹಾಲಿ ಸರ್ಕಾರಗಳನ್ನು ಬೀಳಿಸೋದು ಪ್ರಜಾಪ್ರಭುತ್ವ ವಿರೋಧಿ ಕೆಲಸ. ಬಿಜೆಪಿ ಮಾಡ್ತಿರೋದು ಸಮ್ಮತವಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ರು. ಇದೇ ವೇಳೆ, ಸಿದ್ದರಾಮಯ್ಯ ಮಾತನಾಡಿ, ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಯಶ್ವಂತ್ ಸಿನ್ಹಾ ರಾಷ್ಟ್ರಪತಿಯಾಗುವ ಅಗತ್ಯವಿದೆ. ಅವರಿಗೆ ನಮ್ಮ ಬೆಂಬಲ ಅಂದ್ರು. ಇನ್ನು, ಎಐಎಡಿಎಂಕೆಗೆ ಕಾಂಗ್ರೆಸ್ ಕರೆ ಮಾಡಿ ಬೆಂಬಲ ಕೇಳಿದೆ ಎಂಬ ಸುದ್ದಿಯನ್ನು ಎಐಸಿಸಿ ಬೊಗಳೆ ಎಂದು ತಳ್ಳಿಹಾಕಿದೆ.<br /><br />#publictv #bigbulletin
